ನಾನು  CMRNPS ಶಾಲೆಯಲ್ಲಿ   ಪ್ರಸ್ತುತ ಶೈಕ್ಷಣಿಕ ವರ್ಷದಿಂದ  ಕನ್ನಡ ಶಿಕ್ಷಕರಾಗಿ    ಕಾರ್ಯನಿರ್ವಹಿಸುತ್ತಿದ್ದೇನೆ.  ಅಬ್ದುಲ್ ಕಲಾಂರವರ ಹೇಳಿಕೆಯಂತೆ “ಜೀವನ ಹಾಗೂ ಸಮಯ ವಿಶ್ವದ ಬಹುದೊಡ್ಡ ಶಿಕ್ಷಕರು ಜೀವನ ಸಮಯದ ಸದುಪಯೋಗ ಕಲಿಸಿದರೆ , ಸಮಯ ಬದುಕಿನ ಮೌಲ್ಯವನ್ನು ತಿಳಿಸುತ್ತದೆ “ ನನಗೆ   ಹೊಸದನ್ನು  ಕಲಿಯಲು ಇಂತಹ    ಮೌಲ್ಯಯುತ ಸಮಯ  ಮತ್ತು ಅವಕಾಶ ದೊರಕಿದ್ದು  CMRNPS  ಶಾಲೆಯಲ್ಲಿ ಎಂದು  ಹೇಳಲು  ಹೆಮ್ಮೆ ಪಡುತ್ತೇನೆ. CMR  ಅತ್ಯುತ್ತಮ ಕಾರ್ಯಚಟುವಟಿಕೆಗಳ  ಒಂದು ಆಗರ. 

          ನಾನು  ಶಾಲೆಗೆ ಸೇರಿದಾಗ  ONLINE ತರಗತಿಗಳ ಬಗ್ಗೆ    ನನಗೆ ಅಷ್ಟೊಂದು ಅನುಭವ ಇರಲಿಲ್ಲ.  ಶಾಲೆಗೆ ಸೇರಿದ ಮೊದಲ ದಿನದಿಂದಲೇ   ಮೂಲಕ ವೈಯಕ್ತಿಕ ಹಾಗೂ ಬೌದ್ಧಿಕ ಬೆಳವಣಿಗೆ ಹಾಗೂ ಆನ್ಲೈನ್ ತರಗತಿಗಳಿಗೆ ಹೇಗೆ ತಯಾರಾಗಬೇಕು ಎಂಬುದರ ತರಬೇತಿ ಪ್ರಾರಂಭವಾಗಿತ್ತು. ಕಂಪ್ಯೂಟರ್ ಬಗ್ಗೆ ಸಾಕಷ್ಟು ಅನುಭವ ಇರಲಿಲ್ಲ .  ಆದರೆ ಶಾಲೆಯು ನನಗೆ ಅದರ ಬಳಕೆಯ ಬಗ್ಗೆ ತಿಳಿಯುವ ಹಾಗೂ ಶಾಲೆಯ ಕಾರ್ಯಗಳ ಬಗ್ಗೆ ಕಲಿಯುವ ಅವಕಾಶ ಮಾಡಿಕೊಟ್ಟರು.   ಸತತ ಪರಿಶ್ರಮ  ಹಾಗೂ ಶಾಲೆಯ  co-ordinator ಮತ್ತು ಸಹಶಿಕ್ಷಕರ  ಸಹಕಾರದಿಂದ  ಆನ್ಲೈನ್ ತರಗತಿಗಳನ್ನು ಮಾಡಲು ನನಗೆ ಉತ್ತಮ ಮಾರ್ಗದರ್ಶನ ದೊರೆಯಿತು.. ಅದರಲ್ಲೂ ವಿದ್ಯಾರ್ಥಿಗಳು ನನ್ನ ಬೋಧನೆಗೆ ಸ್ಪಂದಿಸಿ ಸಹಕಾರ ಹಾಗೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ನನಗೆ  ಸಮಾಧಾನ ತಂದಿತು

        ಈ ಶಾಲೆಯ ಪ್ರಮುಖ ಹಾಗೂ ವಿಶೇಷವಾಗಿ ಪಾಠ ಬೋಧನೆಯಲ್ಲಿ ಬಳಸುವ tools   ಗಳು  ಬೋಧನೆಯನ್ನು ಪರಿಣಾಮಕಾರಿಯಾಗಿಸಲು  ಸಹಾಯವಾಯಿತು.  ಇಂತಹ tools  ಗಳ  ಬಳಕೆಯೂ ಸಹ ನನಗೆ ಹೊಸದಾಗಿತ್ತು. ನಾನು ಸಾಧ್ಯವಾದಷ್ಟು ನನಗೆ ತಿಳಿದ tools ಗಳ ಮೂಲಕ ಬೋಧನೆಯನ್ನು ಮಾಡಲು ಪ್ರಯತ್ನಿಸಿದೆ.  ಆದರೂ ಶಾಲೆಯಲ್ಲಿ ಕಲಿಯುವುದು ಬಹಳಷ್ಟಿದೆ. ಶಾಲೆಯಲ್ಲಿ   ಬೋಧನೆಗೆ  ಉತ್ತಮ ವಾತಾವರಣವಿದ್ದು ಕಲಿಯುವವರಿಗೆ ಉತ್ತಮ   ಅವಕಾಶ  ಎಂದರೆ  ತಪ್ಪಾಗಲಾರದು. ವಿವಿಧ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಶಿಕ್ಷಕರ ಜ್ಞಾನವನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಳ್ಳಲು  ಸಹಕಾರಿಯಾಗಿದೆ. ಆನ್ಲೈನ್ ತರಗತಿಗಳ ಮೂಲಕ  ಕಂಪ್ಯೂಟರನ್ನು ತಂತ್ರಜ್ಞಾನ  ಬಳಸಿಕೊಂಡು   ತರಗತಿಗಳನ್ನು ನಡೆಸಿದ್ದು ವಿಶೇಷ ಅನುಭವ ನೀಡಿತು.

            ಒಟ್ಟಾರೆಯಾಗಿ ನಾನು ಶಾಲೆಯಲ್ಲಿ ಕಲಿಯುವುದು ಸಾಕಷ್ಟಿದೆ, ಕಲಿಯಲು ಸಾಕಷ್ಟಿದೆ. ನನ್ನ ಬೋಧನೆಯು ಅಷ್ಟೊಂದು ಸಮಾಧಾನ  ನೀಡಿಲ್ಲವಾದರೂ ನನ್ನ  ಸಾಮರ್ಥ್ಯ ಮೀರಿ ಅದನ್ನು ನಿಭಾಯಿಸಲು ಪ್ರಯತ್ನಿಸಿದ್ದೇನೆ.  ಇದು ನನಗೆ ಸ್ವಲ್ಪ ಮಟ್ಟಿನ ಸಂತೋಷವನ್ನು ನೀಡಿದೆ.  ಇದಕ್ಕೆ ಸಹಕಾರ ನೀಡಿದ  ಶಾಲೆಯ ಆಡಳಿತ ಮಂಡಳಿ  ಹಾಗೂ ಸಹ ಶಿಕ್ಷಕ ಶಿಕ್ಷಕಿಯರಿಗೂ ಹಾಗೂ ವಿದ್ಯಾರ್ಥಿಗಳಿಗೂ ಮನಃಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. 

            “CMRNPSನಲ್ಲಿ ನನ್ನ ಪ್ರಯಾಣದ ಅನುಭವ”

 “ನಹಿ ಜ್ಞಾನೇನ ಸದೃಶಂ” –  “ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ.” 

“ ವಿದ್ಯೆಯಿಂದ  ವಿನಯವು , ವಿನಯದಿಂದ ಯೋಗ್ಯತೆ ಲಭಿಸುತ್ತದೆ” 

Posted by cmradmin

Leave a reply

Your email address will not be published. Required fields are marked *